Hebrews 13

ದೇವರನ್ನು ಮೆಚ್ಚಿಸುವುದು ಹೇಗೆ

1
13:1 ರೋಮಾ. 12:10; 1 ಥೆಸ. 4:9; 1 ಪೇತ್ರ. 2:17:
ಸಹೋದರ ಪ್ರೀತಿಯನ್ನು ಸತತವಾಗಿ ತೋರಿಸಿರಿ.
2ಅತಿಥಿ
13:2 ಮತ್ತಾ 25:35; 1 ಪೇತ್ರ. 4:9:
ಸತ್ಕಾರಮಾಡುವುದನ್ನು ಅಲಕ್ಷ್ಯಮಾಡಬೇಡಿರಿ. ಏಕೆಂದರೆ
13:2 ಆದಿ. 18:3; 19:2:
ಅದನ್ನು ಮಾಡುವುದರಲ್ಲಿ ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ.

3ಸೆರೆಯವರ ಸಂಗಡ ನೀವೂ ಜೊತೆಸೆರೆಯವರೆಂದು ತಿಳಿದು, ಅವರಿಗುಂಟಾದ ಶಾರೀರಿಕ ಕಷ್ಟಾನುಭವವು
13:3 ಮೂಲ:ನೀವೂ ದೇಹದಲ್ಲಿದ್ದೀರೆಂದು.
ನಿಮಗೂ ಸಂಭವಿಸಿತೆಂದು ಭಾವಿಸಿಕೊಂಡು,
13:3 ಇಬ್ರಿ. 10:34; ಮತ್ತಾ 25:36:
ಅವರನ್ನು ಜ್ಞಾಪಕಮಾಡಿಕೊಳ್ಳಿರಿ.
4ಎಲ್ಲರೂ
13:4 1 ಕೊರಿ. 7:38; 1 ತಿಮೊ. 4:3:
ವಿವಾಹವನ್ನು ಮಾನ್ಯವಾದದ್ದೆಂದು ಎಣಿಸಬೇಕು ಮತ್ತು
13:4 ಮೂಲ:ಹಾಸಿಗೆಯು.
ದಾಂಪತ್ಯ ಜೀವನವು ಶುದ್ಧವಾಗಿರಬೇಕು. ಏಕೆಂದರೆ
13:4 1 ಕೊರಿ. 6:9:
ಜಾರರಿಗೂ ಮತ್ತು ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳಿದುಕೊಳ್ಳಿರಿ.

5
13:5 1 ತಿಮೊ. 3:3:
ಹಣದಾಸೆಯಿಂದ ದೂರವಿರಿ.
13:5 1 ತಿಮೊ. 6:6,7,8; ಫಿಲಿ. 4:11; ಮತ್ತಾ 6:25:
ನಿಮಗಿರುವವುಗಳಲ್ಲಿ ತೃಪ್ತರಾಗಿರಿ.
13:5 ಯೆಹೋ. 1:5; ಧರ್ಮೋ. 31:6,8:
<<ನಾನು ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ>> ಎಂದು ದೇವರು ತಾನೇ ಹೇಳಿದ್ದಾನೆ.
6ಆದ್ದರಿಂದ,
13:6 ಕೀರ್ತ. 118:6; 27:1:
<<ಕರ್ತನು ನನ್ನ ಸಹಾಯಕನು ನಾನು ಭಯಪಡುವುದಿಲ್ಲ,
13:6 ಕೀರ್ತ. 56:4,11:
ಮನುಷ್ಯನು ನನಗೆ ಏನು ಮಾಡಿಯಾನು?>> ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.

7ನಿಮಗೆ ದೇವರ ವಾಕ್ಯವನ್ನು ಬೋಧಿಸಿ
13:7 ಇಬ್ರಿ. 13:17,24:
ನಿಮ್ಮ ಸಭಾನಾಯಕರನ್ನು ನೆನಪುಮಾಡಿಕೊಳ್ಳಿರಿ. ಅವರು ಜೀವಾಂತ್ಯದವರೆಗೆ ಯಾವ ರೀತಿ ನಡೆದುಕೊಂಡುರೆಂಬುದನ್ನು ನೆನಪಿಸಿಕೊಂಡು ಮತ್ತು
13:7 ಇಬ್ರಿ. 6:12:
ಅವರ ನಂಬಿಕೆಯನ್ನು ಅನುಸರಿಸಿರಿ.

8
13:8 ಇಬ್ರಿ. 1:12; ಯೋಹಾ 8:58; ಪ್ರಕ. 1:4,8;
ಯೇಸು ಕ್ರಿಸ್ತನು ನಿನ್ನೇ ಇದ್ದ ಹಾಗೆಯೇ, ಈ ಹೊತ್ತು, ನಿರಂತರವೂ ಇರುವನು.

9
13:9 ಎಫೆ. 4:14:
ನಾನಾ ವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಿಕೊಳ್ಳಬೇಡಿರಿ. ಏಕೆಂದರೆ ದೇವರ ಕೃಪೆಯಿಂದ ಹೃದಯವನ್ನು ದೃಢಪಡಿಸಿಕೊಳ್ಳುವುದು ಒಳ್ಳೆಯದು.
13:9 ಕೊಲೊ. 2:16:
ಭೋಜನ ಪದಾರ್ಥಗಳ ಕುರಿತಾದ ನಿಯಮಗಳನ್ನು ಅನುಸರಿಸುವವರಿಗೆ ಏನೂ ಪ್ರಯೋಜನವಾಗುವುದಿಲ್ಲ.

10ನಮಗೊಂದು ಯಜ್ಞವೇದಿ ಉಂಟು
13:10 1 ಕೊರಿ. 9:13; 10:18:
ಈ ವೇದಿಯ ಪದಾರ್ಥಗಳನ್ನು ತಿನ್ನುವುದಕ್ಕೆ ಗುಡಾರದಲ್ಲಿ ಸೇವೆ ನಡೆಸುವವರಿಗೆ ಹಕ್ಕಿಲ್ಲ.
11ಮಹಾಯಾಜಕನು ದೋಷಪರಿಹಾರಕ ಯಜ್ಞದ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರ ಸ್ಥಾನದೊಳಗೆ ಹೋಗುತ್ತಾನೆ, ಆದರೆ
13:11 ವಿಮೋ. 29:14; ಯಾಜ. 16:27:
ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲ.

12ಅದರಂತೆ ಯೇಸು ಕೂಡ
13:12 ಇಬ್ರಿ. 9:12:
ಸ್ವಂತ ರಕ್ತದಿಂದ ತನ್ನ ಜನರನ್ನು ಶುದ್ಧೀಕರಿಸುವುದಕ್ಕೋಸ್ಕರ
13:12 ಮತ್ತಾ 21:39; ಯೋಹಾ. 19:17,20; ಅ. ಕೃ. 7:58:
ಪಟ್ಟಣದ ಹೊರಗೆ ಸತ್ತನು.
13ಆದ್ದರಿಂದ ನಾವು
13:13 ಇಬ್ರಿ. 11:26; 1 ಪೇತ್ರ. 4:14:
ಆತನ ನಿಮಿತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ, ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೊಣ.
14ಏಕೆಂದರೆ
13:14 ಇಬ್ರಿ. 11:10,16; ಎಫೆ. 2:19; ಫಿಲಿ. 3:20:
ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ. ಭವಿಷ್ಯತ್ತಿನಲ್ಲಿ ಬರುವ ಪಟ್ಟಣವನ್ನು ಎದುರುನೋಡುತ್ತಾ ಇದ್ದೇವೆ.

15ಆದ್ದರಿಂದ
13:15 ಎಫೆ. 5:20:
ಯೇಸುವಿನ ಮೂಲಕವಾಗಿಯೇ ದೇವರಿಗೆ
13:15 ಯಾಜ. 7:12; ಕೀರ್ತ. 107:22; 116:17:
ಸ್ತೋತ್ರವೆಂಬ ಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ,
13:15 ಯೆಶಾ. 57:19; ಹೋಶೇ. 14:2; ಕೀರ್ತ. 119:108:
ಆತನನ್ನು ನಾವು ಕರ್ತನೆಂದು ನಂಬಿ ಬಾಯಿಂದ ಅರಿಕೆ ಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ.
16ಇದಲ್ಲದೆ ಪರೋಪಕಾರ ಮಾಡುವುದನ್ನು,
13:16 ರೋಮಾ. 12:13:
ಬೇರೆಯವರಿಗೆ ಸಹಾಯ ಮಾಡುವುದನ್ನು ಮರೆಯಬೇಡಿರಿ.
13:16 ಮೀಕ. 6:7,8; ಫಿಲಿ. 4:18:
ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.

17
13:17 ಇಬ್ರಿ. 13:7, 24:
ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು
13:17 ಯೆರೆ. 13:20; ಯೆಹೆ. 34:10:
ಲೆಕ್ಕ ಒಪ್ಪಿಸಬೇಕಾದವರಾಗಿರುವುದರಿಂದ ನಿಮ್ಮ ಆತ್ಮಗಳನ್ನು
13:17 ಯೆಹೆ. 3:17:
ಕಾಯುವವರಾಗಿದ್ದಾರೆ.
13:17 ಅ. ಕೃ. 20:24,31:
ಅವರು ದುಃಖಿಸದೆ ಸಂತೋಷದಿಂದ ಇದನ್ನು ಮಾಡುವಂತೆ ನಡೆದುಕೊಳ್ಳಿರಿ. ಏಕೆಂದರೆ ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.

ಕಡೆ ಮಾತುಗಳು

18
13:18 1 ಥೆಸ. 5:25; 2 ಥೆಸ. 3:1:
ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ಒಳ್ಳೆಯ ಮನಸಾಕ್ಷಿ ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ.
19ಮತ್ತು ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರುಗಿ ಬರುವಂತೆ
13:19 ಫಿಲೆ. 22:
ನೀವು ಪ್ರಾರ್ಥಿಸಬೇಕೆಂದು ನಾನು ನಿಮ್ಮನ್ನು ಬಹಳವಾಗಿ ಕೇಳಿಕೊಳ್ಳುತ್ತೇನೆ.

20
This verse is empty because in this translation its contents have been moved to form part of verse Heb 13:21.
In this translation, this verse contains text which in some other translations appears in verses Heb 13:20-Heb 13:21.
21
13:20 ಅಥವಾ, ಕುರಿಗಳ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ನಿತ್ಯವಾದ ಒಡಂಬಡಿಕೆಯನ್ನು ನಿಶ್ಚಯಪಡಿಸಿದ ರಕ್ತದ ನಿಮಿತ್ತ ಸತ್ತವರೊಳಗಿಂದ ಬರಮಾಡಿದ.
ನಿತ್ಯವಾದ
13:20 ಜೆಕ. 9:11; ಇಬ್ರಿ. 10:29:
ಒಡಂಬಡಿಕೆಯನ್ನು, ರಕ್ತದಿಂದ ನಿಶ್ಚಯಪಡಿಸುವುದಕ್ಕಾಗಿ,
13:20 ಮೂಲ:ಕುರಿಗಳ ದೊಡ್ಡ ಕುರುಬನಾಗಿರುವ; ಯೆಶಾ. 63:11; ಯೋಹಾ. 10:11:
ಸಭೆಯೆಂಬ ಹಿಂಡಿಗೆ ಮಹಾಪಾಲಕನಾಗಿರುವ ನಮ್ಮ ಕರ್ತನಾದ ಯೇಸುವನ್ನು
13:20 ಅ. ಕೃ. 2:24:
ಸತ್ತವರೊಳಗಿಂದ ಬರಮಾಡಿದ,
13:21 ರೋಮಾ. 15:33:
ಶಾಂತಿದಾಯಕನಾದ ದೇವರು, ನೀವು ಆತನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲ ಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಗಳನ್ನು ನಿಮಗೆ ದಯಪಾಲಿಸಿ, ಆತನು ಯೇಸು ಕ್ರಿಸ್ತನ ಮೂಲಕ ತನಗೆ ಮೆಚ್ಚಿಕೆಯಾದದ್ದನ್ನು
13:21 ಫಿಲಿ. 2:13 ಕೆಲವು ಪ್ರತಿಗಳಲ್ಲಿ, ನಿಮ್ಮೊಳಗೆ ಎಂದು ಬರೆದಿದೆ.
ನಮ್ಮಲ್ಲಿ ನೆರವೇರಿಸಲಿ.
13:21 ರೋಮಾ. 11:36:
ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್.

22ಸಹೋದರರೇ, ಈ ಬುದ್ಧಿಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
13:22 1 ಪೇತ್ರ. 3:12:
ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ.

23
13:23 1 ಥೆಸ. 3:2:
ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬುದು ನಿಮಗೆ ತಿಳಿದಿರಲಿ. ಅವನು ಬೇಗ ಬಂದರೆ ನಾನು ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.

24ನಿಮ್ಮ
13:24 ಇಬ್ರಿ. 13:7,17:
ಎಲ್ಲಾ ಸಭಾನಾಯಕರಿಗೂ ಮತ್ತು ಪರಿಶುದ್ಧ ದೇವಜನರಿಗೂ ವಂದನೆ ಹೇಳಿರಿ. ಇತಾಲ್ಯ ದೇಶದಿಂದ ಬಂದವರು ನಿಮಗೆ ವಂದನೆ ಹೇಳುತ್ತಾರೆ.

25
13:25 ಕೊಲೊ. 4:18:
ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.

Copyright information for KanULB